Monday, December 8, 2008

ಏನೋ ಹೇಳಬಹುದಿತ್ತು

ನಾನು ನಿನಗೆ ಏನೋ ಹೇಳಬಹುದಿತ್ತು
ನೀನೂ ನನಗೆ ಏನೋ ಹೇಳಬಹುದಿತ್ತು
ಏನೂ ಹೇಳದೆಯೇ ಕಳೆದು ಹೋಯಿತು
ಆದರೂ ಆ ಬದುಕು ಅದೆಷ್ಟು ಚೆನ್ನಾಗಿತ್ತು.

ಆ ದಾರಿಯ ತುಂಬಾ ಮುಳ್ಳುಗಳಿದ್ದವು
ನೀನು ಜತೆಗಿದ್ದಾಗ ಗೊತ್ತೇ ಇರಲಿಲ್ಲ
ಸವೆಸಿ, ಸವೆಸಿ ಒಂಟಿಯಾದ ಪಯಣಿಗನಿಗೆ
ಏನೋ ಹೇಳಬಹುದಿತ್ತು.

ನೀನು ನಡೆದ ನೆಲ ಮಿದುವಾಗಿದೆ. ಅದು
ನನ್ನೆದೆ ಎಂದು ತಿಳಿದದ್ದು ನೀನು ತೀರ
ತಲುಪಿದ ಮೇಲೆಯೇ, ನಿನಗೆ
ಏನೋ ಹೇಳಬಹುದಿತ್ತು.

ಸಂಜೆಗಳನ್ನೆಲ್ಲಾ ಸುಮ್ಮನೆ ಪುಡಿಗಟ್ಟಿದೆವು
ನೀನು ಮೌನವಾಗಿ, ನಾನು ಕಿವುಡನಾಗಿ
ಕೂತು ಕೂತು ಹಾಗೇ ಎದ್ದು ಹೋಗಿದ್ದೆವು
ಏನೋ ಹೇಳಬಹುದಿತ್ತು.

ಬದುಕಿನಲ್ಲಿ ಕನಸುಗಳನ್ನು ತೇಲಿಬಿಟ್ಟೆವು
ಶೂನ್ಯವೇ ಮಿತಿಯೆಂಬಂತೆ
ಕೊನೆಗೆ ಉಳಿದದ್ದು ಅದು ಮಾತ್ರ- ಬೆಚ್ಚಗಾಗಿ
ಇಬ್ಬರಿಗೂ ಏನೋ ಹೇಳಬಹುದಿತ್ತು
ಆದರೂ ಆ ಬದುಕು ಅದೆಷ್ಟು ಚೆನ್ನಾಗಿತ್ತು.

7 comments:

ಕನಸು said...

ಚೆನ್ನಾಗಿದೆ ಕವಿತೆಯ ಶಿರ್ಷೀಕೆ.
ಧನ್ಯವಾದಗಳು

ಚಿತ್ರಾ ಸಂತೋಷ್ said...

ಪ್ರೀತಮಣ್ಣ..ಏನೋ ಹೇಳಬಹುದಿತ್ತು..ಚಂದ ಕವನ. ನಾನು ಹೇಳಬೇಕೆಂದುಕೊಂಡಿದ್ದೀನಿ..ಅದೇ ಸ್ವಲ್ಪ ಟೈಮ್ ಮಾಡ್ಕೊಂಡು ಬೇಗ ಅಪ್ ಡೇಟ್ ಮಾಡ್ತಿಯಾ?
-ಚಿತ್ರಾ

ಗಿರಿ said...

ಬೇಸಿಗೆಯಲ್ಲೇ, ಮಳೆಯ ಚಂದ ಅರ್ಥ ಆಗೋದು ಆಲ್ವಾ...

ಕೂತು ಕೂತು ಹಾಗೇ ಎದ್ದು ಹೋಗಿದ್ದೆವು
ಏನೋ ಹೇಳಬಹುದಿತ್ತು....

ತುಂಬಾ ಇಷ್ಟವಾದ್ವು ಈ ಸಾಲುಗಳು...
ವಾಹ್... ನಮ್ಮೊಳಗಿನ ಕೂಗು ಕೃತಿಯಾಗಿಸಿದ್ದೀರಾ...

ಅಭಿನಂದನೆಗಳೊಂದಿಗೆ
ಗಿರಿ

ಧರಿತ್ರಿ said...

ಏನೋ ಹೇಳ್ತೀನಿ ಅಂದ ಜನದ ಸುದ್ದಿನೇ ಇಲ್ಲ
-ಧರಿತ್ರಿ

Anonymous said...

ನಮಸ್ತೆ,

ಕನ್ನಡದ ಎಲ್ಲ ಯುವ ಕವಿಗಳನ್ನು ಒಂದು ಗೂಡಿಸಲು ವೇದಿಕೆಯಾಗಿ ಯುವ ಕವಿ ಯನ್ನು ಪ್ರಾರಂಭಿಸುತ್ತಿದ್ದೇವೆ. ಕನ್ನಡದ ಎಲ್ಲ ಕವಿಗಳು ಮತ್ತು ಕಾವ್ಯ ಪ್ರೇಮಿಗಳು ಜೊತೆಸೇರಿ ಕಾವ್ಯವನ್ನು ಓದೋಣ, ಕಾವ್ಯವನ್ನು ಚರ್ಚಿಸೋಣ. ನಮ್ಮೊಡನೆ ಸೇರಿ..
http://yuvakavi.ning.com/

Unknown said...

hi Preetam,

nice1..

prashi said...

hello friend its really nice.sir please read my blog.


neenandre.blogspot.com This is my blog read and tell me your words